‘ದಿನಕ್ಕೊಮ್ಮೆ ರಾಗಿ ತಿಂದರೆ ಆಗುವನು ನಿರೋಗಿ, ಯೋಗ್ಯ..ರಾಗಿ ಭೋಗರಾಗಿ ಭಾಗ್ಯವಂತ…ರಾಗಿ ನೀವು
ರಾಗಿಯು ವಿಶಿಷ್ಟ ಪೋಶಕಾಂಶಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ರಾಗಿಯನ್ನು ಗಂಜಿ, ರಾಗಿ ಅಂಬಲಿ, ರಾಗಿ ಮುದ್ದೆ, ಮತ್ತು ರಾಗಿಯನ್ನ ಪುಡಿ ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಹೀಗೆ ಹಲವಾರು ವಿಧಗಳಲ್ಲಿ ನಾವು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇಷ್ಟೆಲ್ಲ ಆರೋಗ್ಯಕ್ಕೆ ಅವಶ್ಯಕವಾಗಿರುವ ಅಂಶ ಹೊಂದಿರುವ ರಾಗಿಯನ್ನು ಬಳಸಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಅದರ ಆರೋಗ್ಯಕ್ಕೆ ಸಹಾಯಕಾರಿಯಾಗಿರುವ ಅಂಶವೇ ಪ್ರಧಾನ ಕಾರಣ. ಇದನ್ನು ಭಾರತ ಸೇರಿದಂತೆ ಆಫ್ರಿಕಾ, ಈಜಿಪ್ಟ್ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಕೂಡಾ ಬೆಳೆಯುತ್ತಾರೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಈ ರಾಗಿಗೆ ಇದೆ. ಅದು ಯಾವುದು ಎಂದು ತಿಳಿಯುವ ಕೂತುಹಲ ಇದ್ರೇ ಈ ವರದಿ ಓದಿ….
ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ),ರಾಗಿ ಮಾಲ್ಟ್ ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ. ಮಧುಮೇಹ (ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿ ಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು ಇನ್ನೂ ಹತ್ತು ಹಲವಾರು ರೀತಿಯಲ್ಲಿ ರಾಗಿಯನ್ನ ಬಳಕೆ ಮಾಡಲಾಗುತ್ತಿದೆ.
ಜನಪದರಲ್ಲಿ ಅಥವಾ ನಮ್ಮ ಪೂರ್ವಿಕರು ರಾಗಿಯ ಬಗೆಗೆ ವಿಶೇಷ ಗೌರವಿದೆ. ಇದು ಜನಪದರ ಮೂಲ ಜೀವನಾಧಾರ ಆಹಾರ. ರಾಗಿಯನ್ನು ಆಹಾರದ ಅನೇಕ ರೂಪಗಳಲ್ಲಿ ಬಳಸುವುದುಂಟು. ಸೇವಿಗೆಯನ್ನು ರಾಗಿಯಿಂದ ತಯಾರಿಸಲಾಗುತ್ತದೆ. ರಾಗಿಯ ಪೌಷ್ಟಿಕತೆಯನ್ನು ಎತ್ತಿಹಿಡಿಯುವ `ರಾಗಿ ತಿಂದವ ನಿರೋಗಿ’ ಎಂಬ ಗಾದೆ ಮಾತು ಜನಪದರಲ್ಲಿ ರಾಗಿಯ ಬಗೆಗೆ ವಿಶೇಷ ಗೌರವ ಮಮತೆಗಳಿವೆ. ಇದು ಜನಪದರ ಮೂಲ ಜೀವನಾಧಾರ ಆಹಾರ. ರಾಗಿಯನ್ನು ಆಹಾರದ ಅನೇಕ ರೂಪಗಳಲ್ಲಿ ಬಳಸುವುದುಂಟು. ಸೇವಿಗೆಯನ್ನು ರಾಗಿಯಿಂದ ತಯಾರಿಸಲಾಗುತ್ತದೆ. ರಾಗಿಯ ಪೌಷ್ಟಿಕತೆಯನ್ನು ಎತ್ತಿಹಿಡಿಯುವ `ರಾಗಿ ತಿಂದವ ನಿರೋಗಿ’ ಎಂಬ ಗಾದೆ ಮಾತು ರೂಢಿಯಲ್ಲಿದೆ. ಜನಪದರು ರಾಗಿಮುದ್ದೆ ಹಾಗೂ ಮಾಂಸದ ಎಸರನ್ನು ಪಂಚಪ್ರಾಣವೆಂದು ಭಾವಿಸುತ್ತಾರೆ. `ಸಿಂಡುಪಂಡು ಎಂದರೆ ಚೆಂಡು ವೋಟು’ ಎಂಬ ಗಾದೆ ಮಾಂಸದ ಎಸರಿದ್ದರೆ ಒಂದು ರಾಗಿಮುದ್ದೆಗಿಂತಲೂ ಹೆಚ್ಚು ಉಣ್ಣುವ, ಉಣ್ಣಬಯಸುವ ಅಪೇಕ್ಷೆಯನ್ನು ಸೂಚಿಸುತ್ತದೆ. ಇದೇ ಭಾವವನ್ನು ಬಿಂಬಿಸುವ ಇನ್ನೊಂದು ಗಾದೆ; `ಕೋಳಿಬಾಡ ಎಸರು, ಕೋಲಮ್ಯಾಗಲ ಹಿಟ್ಟು (ಬಿಸಿಹಿಟ್ಟು), ತೊರೆಮಳ್ಳು (ಮರಳು), ಹೊಂಗೆನೆಳ್ಳು (ನೆರಳು), ಸಗ್ಗಸುಳ್ಳು. ಈ ಗಾದೆ ಜನಪದರ ಲೌಕಿಕ ಜೀವನಾಪೇಕ್ಷೆಯ ಪರಾಕಾಷ್ಠತೆಯನ್ನು ಅವರ ಕೈಗೆಟಕುವ ಸ್ವರ್ಗದ ಸುಖವನ್ನೂ ಮನವರಿಕೆ ಮಾಡಿಕೊಡುತ್ತದೆ. ಜನಪದರು ರಾಗಿಮುದ್ದೆ ಹಾಗೂ ಮಾಂಸದ ಎಸರನ್ನು ಪಂಚಪ್ರಾಣವೆಂದು ಭಾವಿಸುತ್ತಾರೆ. `ಸಿಂಡುಪಂಡು ಎಂದರೆ ಚೆಂಡು ವೋಟು’ ಎಂಬ ಗಾದೆ ಮಾಂಸದ ಎಸರಿದ್ದರೆ ಒಂದು ರಾಗಿಮುದ್ದೆಗಿಂತಲೂ ಹೆಚ್ಚು ಉಣ್ಣುವ, ಉಣ್ಣಬಯಸುವ ಅಪೇಕ್ಷೆಯನ್ನು ಸೂಚಿಸುತ್ತದೆ. ಇದೇ ಭಾವವನ್ನು ಬಿಂಬಿಸುವ ಇನ್ನೊಂದು ಗಾದೆ; `ಕೋಳಿಬಾಡ ಎಸರು, ಕೋಲಮ್ಯಾಗಲ ಹಿಟ್ಟು (ಬಿಸಿಹಿಟ್ಟು), ತೊರೆಮಳ್ಳು (ಮರಳು), ಹೊಂಗೆನೆಳ್ಳು (ನೆರಳು), ಸಗ್ಗಸುಳ್ಳು. ಈ ಗಾದೆ ಜನಪದರ ಲೌಕಿಕ ಜೀವನಾಪೇಕ್ಷೆಯ ಪರಾಕಾಷ್ಠತೆಯನ್ನು ಅವರ ಕೈಗೆಟಕುವ ಸ್ವರ್ಗದ ಸುಖವನ್ನೂ ಮನವರಿಕೆ ಮಾಡಿಕೊಡುತ್ತದೆ.
* ಅಸ್ತಮಾ ತಡೆಗಟ್ಟುವಿಕೆಗೆ: ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.* ಆಂಟಿಆಕ್ಸಿಡೆಂಟ್ ಪ್ರಾಪರ್ಟೀಸ್‌ಗಳನ್ನು ಹೊಂದಿದೆ: ಧಾನ್ಯಗಳ ಎಲ್ಲಾ ಪ್ರಭೇದಗಳು ಪಾಲಿಫೆನೊಲ್ಸ್ ಎಂದು ಕರೆಯಲ್ಪಡುವ ಫೈಟೊಕೆಮಿಕಲ್‌ಗಳಲ್ಲಿ ತುಂಬಿರುತ್ತವೆ. ಅವು ಪ್ರಬಲವಾಗಿ ರೋಗನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮನುಷ್ಯನ ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸಬಹುದು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.* ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ: ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.* ರಕ್ತಹೀನತೆಯನ್ನು ತಡೆಯುತ್ತದೆ: ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.*ವಿಷ ಆಮ್ಲವನ್ನು ತೆಗೆದುಹಾಕುತ್ತದೆ: ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ* ಹೃದಯದ ಆರೋಗ್ಯ ಕಾಪಾಡುತ್ತದೆ: ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ* ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ : ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. * ಮಧುಮೇಹವನ್ನು ನಿಯಂತ್ರಿಸುತ್ತದೆ : ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ರೋಗವಾಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್‌ಗಳ ದಕ್ಷತೆಯನ್ನು ಹೆಚ್ಚಿಸುವಂತಹ ಪ್ರಮುಖ ಖನಿಜಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ರಾಗಿಯನ್ನು ಸೇವಿಸುವ ಜನರಲ್ಲಿ 30% ದಷ್ಟು ಮಧುಮೇಹವು ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಒಟ್ಟಿನಲ್ಲಿ ರಾಗಿಯು ವಿಶಿಷ್ಟ ಪೋಶಕಾಂಶಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ರಾಗಿಯನ್ನು ಗಂಜಿ, ರಾಗಿ ಅಂಬಲಿ, ರಾಗಿ ಮುದ್ದೆ, ಮತ್ತು ರಾಗಿಯನ್ನ ಪುಡಿ ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಹೀಗೆ ಹಲವಾರು ವಿಧಗಳಲ್ಲಿ ನಾವು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇಷ್ಟೆಲ್ಲ ಆರೋಗ್ಯಕ್ಕೆ ಅವಶ್ಯಕವಾಗಿರುವ ಅಂಶ ಹೊಂದಿರುವ ರಾಗಿಯನ್ನು ಬಳಸಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.
ರಾಗಿಯಲ್ಲಿನ ಪೋಷಕಾಂಶಗಳ ವಿವರ :
100 ಗ್ರಾಂ ರಾಗಿಯಲ್ಲಿನ ಪೋಷಕಾಂಶಗಳ ವಿವರ ಕೆಳಕಂಡಂತಿದೆ:
*ಪೋಷಕಾಂಶ – ಪ್ರತಿಶತ
ಪ್ರೋಟಿನ್ – 7.3 ಗ್ರಾಂ
ಕೊಬ್ಬು -1.3 ಗ್ರಾಂ
ಪಿಷ್ಟ – 72 ಗ್ರಾಂ
ಖನಿಜಾಂಶ -2.7 ಗ್ರಾಂ
ಸುಣ್ಣದಂಶ -3.44 ಗಾಂ
ನಾರಿನಂಶ —3.6ಗ್ರಾಂ
ಶಕ್ತಿ -328 ಕಿ.ಕ್ಯಾ
ನಿಮಗೆ ರಾಗಿಯ ಬಳಕೆಯಿಂದಾಗುವ ಅನುಕೂಲಗಳ ಬಗ್ಗೆ ತಿಳಿದಿದೆಯೇ ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ ಆದರೆ ರಾಗಿ ನಮ್ಮದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ
ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ,ರಾಗಿ ರೊಟ್ಟಿ ಹೀಗೆ ಒಂದಾ ಎರಡ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಅಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ ರಾಗಿ ಧ್ಯಾನಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೆರೆ ಧ್ಯಾನಗಳಿಗಿಲ್ಲ ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.
ತಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೆಬೇಕು, ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೋಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ. ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತಿ ದಿನ ರಾಗುಇ ಮುದ್ದೆಯನ್ನು ತಿಂದೇ ತಮ್ಮ್ ದೈನಂದಿನ ಕಾರ್ಯವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.
* ದೇಹದ ಕೊಬ್ಬನ್ನು ಹಾಗೂ ತೂಕ ಇಳಿಸುವವಲ್ಲಿ ಸಹಕಾರಿ* ಮೂಳೆಗಳಿಗೆ ಉತ್ತಮ : ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ.ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಯಿಯಂ ಮತ್ತು ಮಿಟಮಿನ್ ಡಿ ಇಇದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.* ಮಧುಮೇಹಿಗಳಿಗೆ ಸೂಕ್ತ : ಮಧುಮೇಹದ ಮೆಲ್ಟಿಟಸ್ ಮತ್ತು ಜೀರ್ಣಾವ್ಯೂಹದ ಅಸ್ಪಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.*ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.* ನೀವು ಒಬ್ಬ ಅನೀಮಿಕ್ ಆಗಿದ್ದರೆ.* ನಿಮಗೆ ರಿಲ್ಯಕ್ಸ್ ಆಗಲು ಸಹಕಾರಿ*ದೇಹವನ್ನು ತಂಪುಗೊಳಿಸುತ್ತದೆ.*ಸದೃಢತೆಗೆ*ಮಲಬದ್ಧತೆಗೆ ಉಪಯೋಗಕಾರಿ*ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ.* ನೂತನ ತಾಯಂದಿರಿಗೆ ಹಿಮೋಗ್ಲೋಬೀನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.* ರಾಗಿ ತಂಪು ಗುಣ ಹೊಂದಿರುವ ಸ್ವಾತಿಕ ಆಹಾರ.
” ಕ್ಯಾಲ್ಸಿಯಂ ಖನಿಜಾಂಶಗಳು, ಪ್ರೋಟಿನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ. ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ. ವೈದರು ಕೋಡುವ ಮಿಟಮಿನ್ ಮಾತ್ರೆಗಳನ್ನು ನುಂದುವ ಬದಲು ರಾಗಿ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ ಬಳಲಿಕೆ ಮಾಯವಾಗಿ ಶರೀರವು ಹಾಯೆನಿಸುವುದು. ಇದರಲ್ಲಿರುವ ಪೋಷಕಾಂಶಗಳು ಬಹುಬೇಗನೆ ಜೀರ್ಣವಾಗುವಂಥವು. ಹಾಗಾಗಿ ಪುಟ್ಟ ಮಗುವಿಗೆ ೬ ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ”
- ಒಟ್ಟಿನಲ್ಲಿ ಹಿಟ್ಟು ತಿಂದು ಜಟ್ಟಿಯಾಗು. ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ’ ಎಂಬ ನಾಣ್ನುಡಿಯಂತೆ ನಮ್ಮ ಸಮ ಶೀತೋಷ್ಣ ವಲಯದ ಭಾರತ ದೇಶಕ್ಕೆ ಅದರಲ್ಲೂ ಕರ್ನಾಟಕಕ್ಕೆ ರಾಗಿಯ ತಿನಿಸುಗಳು ಆರೋಗ್ಯ ವರ್ಧಕ. ಹೊಟ್ಟೆಗೆ ತಂಪು. ‘ದಿನಕ್ಕೊಮ್ಮೆ ರಾಗಿ ತಿಂದರೆ ಆಗುವನು ನಿರೋಗಿ, ಯೋಗ್ಯ..ರಾಗಿ ಭೋಗರಾಗಿ ಭಾಗ್ಯವಂತ…ರಾಗಿ ನೀವು ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ ಎಂಬುದು ನಮ್ಮ ಪೂರ್ವಜರ ಮಾತಿನ ಸಾರವಾಗಿದೆ ಅವರು ಮಾತಿನ ಸಾರವನ್ನ ಹಾಗೂ ಅದರ ಮಹತ್ವನ್ನ ನಾವು ತಿಳಿಯಬೇಕಿದೆ.
ಮೂಲ:ವಿಕಿಪಿಡಿಯಾ ಗೂಗಲ್