ಉನ್ನತ ಸುದ್ದಿವಿಶ್ವ
Trending

ಡಾ.ಅಂಬೇಡ್ಕರರ ತತ್ವಾದರ್ಶಗಳು ಸರ್ವಕಾಲಕ್ಕೂ ಮಾರ್ಗದರ್ಶಕ.

ಅಂಬೇಡ್ಕರ್ ಅವರು ರೂಪಿಸಿಕೊಟ್ಟ ಭಾರತದ ಸಂವಿಧಾನ ಇಂಥ ನಾಡಿನಲ್ಲಿ ಜೀವಿಸುತ್ತಿ ರುವುದೇ ನಮಗೆಲ್ಲ ದೊಡ್ಡ ಹೆಮ್ಮೆ. ಅವರ ಜೀವನ ಸಾಧನೆಯು ಸೂರ್ಯ-ಚಂದ್ರರಿರುವವರೆಗೂ ಭೂಮಿಯ ಮೇಲಿರುವವರಿಗೆ ಪ್ರೇರಣೆಯಾಗಬೇಕು. ದಾರಿದೀಪವಾಗಬೇಕು.

ನನ್ನ ಜೀವಿತದ ಅವಧಿಯಲ್ಲಿ ನನ್ನ ಜನರು ಈ ದೇಶವ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜತೆ ಹಂಚಿ ಕೊಳ್ಳುವುದನ್ನು ನೋಡಲು ನಾನು ಬಯಸಿದ್ದೆ. ಆದರೆ ಅಂಥ ಸಾಧ್ಯತೆ ನನಗೀಗ ಕಾಣುತ್ತಿಲ್ಲ”- ಸಮಾನತೆಗಾಗಿ ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಅತ್ಯಂತ ಬೇಸರದಿಂದ ನುಡಿದ ಮಾತುಗಳಿವು.

ಜೀವನ ಪೂರ್ತಿ ಯಾವುದಕ್ಕಾಗಿ ಹೋರಾಡಿದ್ದರೋ ಆ ಗುರಿ ತಲುಪಲು ಸಾಧ್ಯವಾಗದಿದ್ದಾಗ ಅತ್ಯಂತ ನೋವಿನ ನುಡಿಗಳನ್ನಾಡುತ್ತ, ತಮ್ಮ ಮನದಾಳದ ದು:ಖವನ್ನು ಈ ರೀತಿಯಾಗಿ ತೋಡಿಕೊಂಡರು. ಯಾರ ಹಕ್ಕುಗಳನ್ನು ಅಧಿಕಾರವನ್ನೂ ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದಷ್ಟೆ ಅವರ ಬಯಕೆಯಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಹೋರಾಟ ಮಾಡಿದರು. ತಾವು ವಿಶ್ವಾಸವಿಟ್ಟ ಜನರೂ ಸ್ವಾರ್ಥಕ್ಕೆ ಬಲಿಯಾದಾಗ ಅದರ ದು:ಖ ಇಮ್ಮಡಿಯಾಯಿತು. ಸಂವಿಧಾನದ ಮೂಲಕವೂ ಸಮಾನತೆಯನ್ನು ಸಾಧಿಸಲು ಅವರು ಪ್ರಯತ್ನಿಸಿದರು. ಆದರೆ, ಜನರ ಮನಸ್ಥಿತಿಯಲ್ಲಿ ಅಂಥ ಬದಲಾವಣೆ ಕಾಣದಿದ್ದಾಗ ಒಂದು ರೀತಿಯಲ್ಲಿ ಅವರು ನಿರಾಶರಾಗಿದ್ದರು. “ಅಂಥ ಪ್ರಯತ್ನವನ್ನು ನಾನು ಮಾಡೋಣವೆಂದರೆ ನಾನು ಕೂಡ ಆನಾರೋಗ್ಯದ ಕಾರಣದಿಂದಾಗಿ ನಿಶಕ್ತನಾಗಿದ್ದೇನೆ ” ಎನ್ನುತ ತಮ್ಮ ದು:ಖವನ್ನು ಹೊರಹಾಕಿದರು ಕೊನೆಗೆ ಅದೇ ಸಮುದಾಯದ ಸ್ವಾರ್ಥಿಗಳ ಬಗೆಗೆ ಕೂಡ ಬಹಿರಂಗವಾಗಿಯೇ ಅಸಮಾದಾನವನ್ನ ಹೊರಹಾಕಿದರು.ನಾನು ಇದುವರೆಗೆ  ಏನನ್ನು  ಸಾಧಿಸಿ ಪಡೆದಿರುವನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದರು.

. ”ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ, ತಮ್ಮ  ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ  ಅವರು ಆಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯ ನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರು ಕೂಡ ಸಮುದಾಯದ ಸೇವೆ ಯನ್ನು ಮಾಡಲು ಮುಂದೆ ಬರುತ್ತಿಲ್ಲ” ಎಂಬುದಾಗಿ ಅಂಬೇಡ್ಕರ್, ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿದವರ ಬಗೆಗಿನ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದರು. ‘ ಚಳವಳಿಯನ್ನು ಮುನ್ನಡೆಸಲು ಬಲ್ಲವರೆಂದು ನನ್ನ ಸಹಪಾರಿಗಳ ಪೈಕಿ ಯಾರಲ್ಲಿ ನಾನು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದನೊ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.  ಎಂದು ನೊಂದಿದ್ದ ಅಂಬೇಡ್ಕರ್, ಈ ಎಲ್ಲವನ್ನೂ ನೋಡಿ ಸಹಿಸಲಾಗದೆ, ತಮ್ಮ ನಂಬಿಕೆಗೆ ಅಪಚಾರವಾದಾಗ ಅಂತಿಮವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಒಂದು ವರ್ಷದಷ್ಟು ಕಾಲ ಆ ಧರ್ಮವನ್ನು ಅಧ್ಯಯನ ಮಾಡಿದ ನಂತರ ಅಂತಿಮವಾಗಿ 1956ರ ಅಕ್ಟೋಬರ್ 14ರಂದು 5 ಲಕ್ಷ ಬೆಂಬಲಿಗರೊಂದಿಗೆ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರ ಗೊಂಡರು. ಆ ಸಂದರ್ಭದಲ್ಲಿ ಅವರ ಅನುಯಾಯಿಗಳು ಇವರನ್ನು ‘ಬೌದ್ಧ ನಾಯಕ’ ಎಂದೇ ಪರಿಗಣಿಸಿದರು

ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು  ಎಲ್ಲ ಮನುಷ್ಯರನ್ನು ಸಮಾನಾಗಿ ಕಾಣಯತ್ತೇನೆ ಕೊಲ್ಲುವುದಿಲ್ಲ,ಕದಿಯುವುದಿಲ್ಲ ,ತಪ್ಪಾದ ಲೈಂಗಿಕ ವರ್ತನೆ ತೊರುವುದಿಲ್ಲ,ಮಧ್ಯ ಸೇವಿಸುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ  ಎಂಬ ಪಂಚಶೀಲ ತತ್ವ ಗಳನ್ನು ಅನುಸರಿಸುತ್ತೇನೆ,ಜ್ಞಾನ,ಸಹನೂ ಭೂತಿ,ಕರ್ತವ್ಯ ಎಂಬ ಪ್ರಮುಖ ತತ್ವಗಳನ್ನು ಆಧರಿಸಿರುವ ಬೌದ್ದ  ಧರ್ಮ ಮಾತ್ರವೇ ನಿಜವಾದ ಧರ್ಮ ಎಂದು ನಾನು ನಂಬಿ‌ದ್ದೇನೆ ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ದ ಧರ್ಮವನ್ಬ ಅಪ್ಪಿಕೊಳ್ಳುವ ಮೂಲಕ ಹೊಸಹುಟ್ಟು ಪಡೆದುಕೊಂಡಿದ್ದೇನೆ.ಇದು ಅಂಬೇಡ್ಕರ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ.

ಮಹಾ ಪರಿನಿರ್ವಾಣ ದಿನ :  ಪರಿನಿರ್ವಾಣ ಎಂಬುದು ಬೌದ್ದ ಧರ್ಮದ ಮುಖ್ಯ ತತ್ವ ಹಾಗೂ ಗುರಿಗಳಲ್ಲಿ ಒಂದಾಗಿದೆ. ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ಧಧರ್ಮದ ಪ್ರಕಾರ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗುತ್ತದೆ. ಒಮ್ಮೆ ನಿರ್ವಾಣ ಸಾಧಿಸಿದರೆ ಪುನರ್ಜನ್ಮದ ಚಿತ್ರವು ನಿಲ್ಲುತ್ತದೆ. ಏಕೆಂದರೆ ನಿರ್ವಾಣವಾದರೆ ಯಾವುದೇ ಕರ್ಮದ ಬಾಕಿ ಉಳಿಯುವುದಿಲ್ಲ ಎನ್ನುವುದು ನಂಬಿಕೆ.

ಅಂಬೇಡ್ಕರ್ ಅವರು ತಮ್ಮ ‘ಬದ್ಧ ಮತ್ತು ಅವರ ಧಮ್ಮ’ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ದೆಹಲಿಯ ತಮ್ಮನಿವಾಸದಲ್ಲಿ 1956 ಡಿಸೆಂಬರ್ 06ರಂದು ಮರಣ ಹೊಂದಿದರು. ಅಂಬೇಡ್ಕರರ ಅನುಯಾಯಿಗಳು, ತಮ್ಮ ಗುರುಗಳು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿ, ಶುದ್ಧ ಮನಸ್ಸಿನವರು ಹಾಗೂ ದೇವರಿಂದ ಆಶೀರ್ವಾದ ಪಡೆದವರು ಎಂದು  ಮಹಾನ್ ಕಾರ್ಯಗಳಿಂದಾಗಿ ಆವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ ಎಂದು ಭಾವಿಸಿ, ಅಂಬೇಡ್ಕರ್ ಅದರ ಪುಣ್ಯತಿಥಿಯನ್ನು ‘ಮಹಾಪರಿನಿರ್ವಾಣ ದಿನ’ ಅವರ ಅನುಯಾಯಿಗಳು ಕರೆದಿದ್ದಾರೆ

ಸಂವಿಧಾನ ಶಿಲ್ಪಿ:ಮಹಾನ್ ಮಾನವತಾವಾದಿ,ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಮಾಜ ಸುಧಾರಕ, ಅರ್ಥ ಶಾಸ್ತ್ರಜ್ಞ, ಪತ್ರಕರ್ತ, ತತ್ರ ಭಗನಿ, ಸಾಹಿತಿ ಇನ್ನೂ ಏನೇನೋ ಆಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರರು, ಒಬ್ಬ ವ್ಯಕ್ತಿ ಏನಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದ್ದರು. ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ ಎರಡು ವರ್ಷ ದುಡಿದ  ಅಂಬೇಡ್ಕರ್ ಅನಾರೋಗ್ಯವಿದ್ದಾಗ್ಯೂ 1948ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಮ್ಮುಖದಲ್ಲಿ ಇಡೀ ರಾಷ್ಟ್ರಕ್ಕೆ ಅದನ್ನು ಸಮರ್ಪಣೆ ಮಾಡಿದರು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು.

ಆರು ದಶಕದ ಹಿಂದೆ ಈ ನೆಲದಲ್ಲಿ ಬದುಕಿದ್ದು,ನಮ್ಮೆಲ್ಲರ ಪ್ರೇರಕರು ಮತ್ತು ಮಾರ್ಗದರ್ಶಕರಾಗಿ ಬದುಕಿಗೊಂದು ದಾರಿ ತೋರಿಸಿಕೊಟ್ಟ ಶಕ್ತಿ ಡಾ.ಅಂಬೇಡ್ಕರ ಅವರ ಹೆಸರು ಹೇಳಿದರೆ ನಮಗೆಲ್ಲ ಏನೋ ಸ್ಫೂರ್ತಿ ಉಕ್ಕಿ ಹರಿಯುತ್ತದೆ, ಹೊಸ ಪ್ರೇರಣೆ ಉಂಟಾಗುತ್ತದೆ, ಒಂದು ಅದರ್ಶ ನಮ್ಮ ಕಣ್ಣೇದುರು ನಿಲ್ಲುತ್ತದೆ, ಅಂಬೇಡ್ಕರ್ ಅವರ ಬದುಕು, ತತ್ವ ಆದರ್ಸಗಳು ನಮ್ಮೆಲ್ಲರ ಪಾಲಿಗೆ ಸಾರ್ವಕಾಲಿಕ ಮಾರಗದರ್ಶಕ .ಸಮಾನತೆಯ ಪ್ರಗತಿಯ ಕನಸು ಕಂಡ ಮೇರುನಾಯಕ ಅವರು. ಅಂಬೇಡ್ಕರರ ಅದರ್ಶ ಎಲ್ಲರ ಜೀವನಕ್ಕೆ ದಾರಿದೀಪ, ಅವರ ಚಿಂತನೆಗಳಿಗೆ ಇಂದಿಗೂ ಎಂದಿಗೂ ಯುವ ಜನತೆಗೆ ಸ್ಪೂರ್ತಿ,

 1920ರ ದಶಕದಲ್ಲೇ ಎರಡೆರಡು ವಿಶ್ವವಿದ್ಯಾಲ ಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಇತನಾಮಿಕ್ಸ್‌ನಿಂದ ಡಾಕ್ಟರೇಟ್ ಪದವಿ ಪಡೆದರು ಎಂದರೆ ಅಂಬೇಡ್ಕರರ ಜೀವನೋತ್ಸಾಹ ಹೇಗಿತ್ತು ಎನ್ನುವುದನ್ನು ನಾವು ಊಹಿಸಲೂ ಸಾಧ್ಯವಾಗುವುದಿಲ್ಲ.

ಡಾಕ್ಟರೇಟ್  ಪದವಿ ಪಡೆದು ಹಿಂದುರುಗಿದಾಗ ಮೊದಲಿನ ಷರತ್ತಿನಂತೆ ಬರೋಡಾದ ಮಹಾರಾಜರ ಸೈನ್ಯದ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದರು ಅಂಬೇಡ್ಕರ್. ಆದರೆ, ಆಸ್ಥಾನಿಕ ಹಿರಿಯ ಮಂತ್ರಿಗಳು ಮಹಾರಾಜರಿಗೆ ತಿಳಿಯದಂತೆ ಆಸ್ಪೃ ಶ್ಯತೆಯ ಆಚರಣೆ ಮೂಲಕ ಇವರಿಗೆ ಕಿರುಕುಳ ನೀಡುತ್ತಿ ದ್ದರು. ಸಾಮಾನ್ಯ ಸಿಪಾಯಿ ಕೂಡ ಇವರ ಫೈಲ್ ಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನೆಲೆ ನೀಡಲಿಲ್ಲ ಮತ್ತು ಉಳದಿದ್ದ ಪಾರ್ಸಿ ಹೋಟೆಲ್‌ನಿಂದ ಇವರನ್ನು ಹೊರಹಾಕಿದರು. ಅಲ್ಲಿ ಕೆಲಸ ಮಾಡಲಾಗದೆ ಅನಿವಾರ್ಯವಾಗಿ ಮುಂಬೈಗೆ ಬಂದ ಅಂಬೇಡ್ಕರರು. ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದರು.ಅಸ್ಪೃಶ್ಯತೆ ವಿರುದ್ದ ಸಮರ ಸಾರಿದರು ಒಬ್ಬ ಅರ್ಥಶಾಸ್ತ್ರಜ್ಞ ರಾಗಿ, ಸಮಾಜ ಸುಧಾರಕನಾಗಿ ,ಕಾನೂನು ತಜ್ಞರಾಗಿ,ನ್ಯಾಯ ಶಾಸ್ತ್ರಜ್ಞರಾಗಿ,ಪತ್ರಕರ್ತರಾಗಿ,ಸಾಹಿತಿಗಳಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಶಿಲ್ಪಿಗಳಾಗಿ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ, ಆಮೋಘ.

ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ  ನಮ್ಮೆಲ್ಲರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲೇ ಶ್ರೇಷ್ಠ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅಂಬೇಡ್ಕರ್ ಅವರು ರೂಪಿಸಿಕೊಟ್ಟ ಭಾರತದ ಸಂವಿಧಾನ ಇಂಥ ನಾಡಿನಲ್ಲಿ ಜೀವಿಸುತ್ತಿ ರುವುದೇ ನಮಗೆಲ್ಲ ದೊಡ್ಡ ಹೆಮ್ಮೆ. ಅವರ ಜೀವನ ಸಾಧನೆಯು ಸೂರ್ಯ-ಚಂದ್ರರಿರುವವರೆಗೂ ಭೂಮಿಯ ಮೇಲಿರುವವರಿಗೆ ಪ್ರೇರಣೆಯಾಗಬೇಕು. ದಾರಿದೀಪವಾಗಬೇಕು.

 

(ಲೇಖಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು,ಕರ್ನಾಟಕ ಸರ್ಕಾರ)

 

 

Leave a Reply

Your email address will not be published. Required fields are marked *

Back to top button
error: Content is protected !!